ಮಳೆಹನಿ

ಮಳೆಹನಿ

ಕೊನೆಗೆ ಉಳಿಯುವುದು ಇವೇ ಕತೆಗಳು

  • ತುಂಗೆ ನಕ್ಕಳು

    ಕೆಂಪಗೆ ನದಿಯಾಗಿ ಹರಿಯುತ್ತಿದ್ದ ತುಂಗೆ ಒಮ್ಮೆ ಪ್ರಣತಿಯನ್ನು ನೋಡಿ ಫಕ್ಕನೆ ನಕ್ಕಂತಾಯಿತು. ಒಂದು ಕ್ಷಣ ಪ್ರಣತಿ ಬೆಚ್ಚಿಬಿದ್ದಳು. ತನ್ನ ತಲೆಯಲ್ಲಿ ಏಳುತ್ತಿರುವ ತೂಫಾನು ತುಂಗೆಗೇನಾದರೂ ಗೊತ್ತಾಯಿತಾ ? ಮೈಯ ರೋಮವೆಲ್ಲಾ ಸೆಟೆದು ನಿಂತಂತಾಯಿತು. ಇದೇನು ಭ್ರಮೆಯೋ ಅಥವಾ ನಿಜಕ್ಕೂ ತುಂಗೆ ನಕ್ಕಳಾ? ತನ್ನ ಬಾಲ್ಯ, ಯೌವನದುದ್ದಕ್ಕೂ ಸುಪ್ತ ಮನಸ್ಸಿನಲ್ಲಿ ಸಣ್ಣಗೆ ಸದ್ದು ಮಾಡುತ್ತಾ ಹರಿಯೋ ತುಂಗೆ… Continue reading

  • ಪಾಪಣ್ಣಾ…ಬಾರೋ ಇಲ್ಲಿ !

    ಆಗ ನನಗಿನ್ನೂ ಎಂಟು ವರ್ಷ ವಯಸ್ಸು. ಇಡೀ ಮನೆಗೆ ಒಬ್ಬನೇ ಮಗ. ನಾಲ್ಕು ಜನ ಅಕ್ಕಂದಿರ ಮುದ್ದು, ಜೊತೆಗೆ ಶ್ಯಾನುಭೋಗರಾಗಿದ್ದ ಅಪ್ಪಯ್ಯ. ಯಾವುದಕ್ಕೂ ಕೊರತೆ ಇರ್ಲಿಲ್ಲ. ಮನೆಯಲ್ಲಿ ಸದಾ ಜನವೋ ಜನ. ಕಟ್ಟಿಗೆಯಲ್ಲಿ ಹಸು-ಕರುಗಳಿಗೆ ಲೆಕ್ಕವಿರಲಿಲ್ಲ. ಹಾಲು-ಮೊಸರು-ತುಪ್ಪ ಇದ್ದೇ ಇರ್ತಿತ್ತು. ಆದ್ರೆ ಯಾಕೋ ಇತ್ತೀಚೆಗೆ ಅಮ್ಮನಿಗೆ ಆರೋಗ್ಯ ಸರಿಯೇ ಇರ್ತಿರ್ಲಿಲ್ಲ. ಮದ್ದಿನ ಪಂಡಿತರು, ದೇವಸ್ಥಾನದ ಶಾಸ್ತ್ರಿಗಳು,… Continue reading

  • ಮಲೆನಾಡ ಮಳೆ ಮತ್ತು ರೈನ್ ಕೋಟು

    ಮಳೆಗಾಲದಲ್ಲಿ ಮಾತ್ರ `ಹೋಗಿಬರ್ತೀನಿ’ ಅಂದಾಗ ಅಪ್ಪ, `ರಸ್ತೆಯಲ್ಲಿರುವ ಅಷ್ಟೂ ಗುಂಡಿಗಳೊಳಗೆ ಕಾಲಿಟ್ಟು ಬಿದ್ದೆದ್ದು ಬನ್ನಿ’ ಅಂತಿದ್ರು. ನಾವು ಮಾಡ್ತಿದ್ದದ್ದೂ ಅದನ್ನೇ ಬಿಡಿ. ವಾರಕ್ಕೆ ಕನಿಷ್ಟ ನಾಲ್ಕು ದಿನವಾರೂ ಬಿದ್ದು ಮಂಡಿ, ಮೊಣಕೈ ತರಚಿಕೊಂಡು ಬರ್ತಿದ್ದ ನಮಗಾಗಿ ಅಪ್ಪ ಮನೆಯಲ್ಲೇ ಒಂದು ಫಸ್ಟ್ ಏಯ್ಡ್ ಸೆಂಟರ್ ಓಪನ್ ಮಾಡಿದ್ರು. ಅಪರೂಪಕ್ಕೊಮ್ಮೆ ಹೀಗೆ ಬೀಳದೆ, ಏಳದೆ ಮನೆಗೆ ಬಂದ್ರೆ… Continue reading

    ಮಲೆನಾಡ ಮಳೆ ಮತ್ತು ರೈನ್ ಕೋಟು
  • ಚಕ್ರು

    ಚಕ್ರು ತುಂಬಾ ಪಾಪದ ಪ್ರಾಣಿ. ಅವನು ಯಾರೊಂದಿಗಾದ್ರೂ ಜಗಳ ಆಡೋದಿರಲಿ, ಮಾತಾಡೋದನ್ನೂ ಹೆಚ್ಚಿನವರು ನೋಡಿರಲಿಲ್ಲ. ತನ್ನದೇ ಲೋಕದಲ್ಲಿ ರಸ್ತೆಯ ಒಂದೇ ಬದಿಯಲ್ಲಿ ನಮ್ಮೂರ ಬೀದಿ ನ್ಯೂಯಾರ್ಕ್ ಸಿಟಿಯೇನೋ ಅನ್ನುವಷ್ಟು ಅಚ್ಚರಿಯಿಂದ ಅವನು ಪೇಟೆಗೆ ನಡೆದುಕೊಂಡು ಹೋಗ್ತಿದ್ದ. ನಮ್ಮೂರಿನ ಅತಿದೊಡ್ಡ ಪ್ರವಾಸಿ ಸ್ಥಳವಾದ ದೇವಸ್ಥಾನದಲ್ಲೇ ಅವನು ಹೆಚ್ಚು ಕಾಣಸಿಗುತ್ತಿದ್ದದ್ದು. Continue reading

    ಚಕ್ರು
  • ಏನ್ ಹುಡ್ಗೀರೋ… !!!

    ಹುಡ್ಗೀನಾ ಮನೇಲಿ ಮುದ್ದಾಗಿ ಸಾಕಿಬಿಟ್ಟಿದ್ದಾರೆ ಅನ್ಸುತ್ತೆ. ಮನೆ ಕೆಲ್ಸನಾದ್ರೂ ಮಾಡ್ತಾಳಾ ಹೇಗೆ? ಭಾರೀ ಕೆಲ್ಸ ಏನಲ್ಲಾ…ಗುಡಿಸೋದು, ನೆಲ ಒರ್ಸೋದು, ಪಾತ್ರೆ ಬೆಳಗೋದು, ಬಟ್ಟೆ ಒಗೆಯೋದು? ಇದೂ ಇಲ್ವೇನ್ರಿ? ಅವ್ರಮ್ಮ ಅದೇನ್ ಹೇಳ್ಕೊಟ್ಟಿದಾರ್ರೀ ಮಗ್ಳಿಗೆ? Continue reading

    ಏನ್ ಹುಡ್ಗೀರೋ… !!!
  • ಅಪ್ಪ

    ಅವಳು ಮನೆಯಿಂದಾಚೆಗೆ ಹೋಗುತ್ತಿಲ್ಲ. ಅವಳು ಹೋಗುತ್ತಿಲ್ಲ ಅನ್ನೋದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ ತನಗೆ. ಏನಂತ ಮಾಡಲಿ? ಹೇಗಂತ ಹೇಳಲಿ? ಹಾಗಂತ ನಂಗೇನೂ ಅವಳ ಮೇಲೆ ದ್ವೇಷವಿಲ್ಲ. ಎಷ್ಟಾದ್ರೂ ನನ್ನದೇ ಕರುಳ ಕುಡಿಯಲ್ಲವಾ? ಎಷ್ಟೊಂದು ಕನಸು, ಎಷ್ಟೊಂದು ಆಸೆ ಅವಳ ಭವಿಷ್ಯದ ಬಗ್ಗೆ. ಅವಳು ಹುಟ್ಟಿದಾಗ ಒಂದು ಕಡೆ ಖುಷಿಯಾದ್ರೆ ಮತ್ತೊಂದು ಕಡೆ ಒಂದು ಸ್ವಲ್ಪ ನಿರಾಸೆಯಾಗಿದ್ದು ಹೌದು.… Continue reading

  • ಸಾಫ್ಟವೇರ್ ಇಂಜಿನಿಯರ್ಗಳೂ… ವೆನಿಲ್ಲಾ ಬೆಳೆಯೂ…

    ಈಗೊಂದಷ್ಟು ವರ್ಷಗಳ ಹಿಂದೆ ಸಾಫ್ಟವೇರ್ ಇಂಜಿನಿಯರ್ಗಳು ರಾತ್ರೋ ರಾತ್ರಿ ಶ್ರೀಮಂತರಾಗ್ಬಿಟ್ರಲ್ಲಾ…ಆಗಂತೂ ಮನೆಯಲ್ಲಿ ಓದ್ತಾ ಇದ್ದ ಮಕ್ಕಳೆಲ್ಲಾ ತಾವು ಶಾಲೆಗೆ ಹೋಗ್ತಿರೋದೇ ಸಾಫ್ಟವೇರ್ ಇಂಜಿನಿಯರ್ಗಳಾಗಿ ಲಕ್ಷಾಂತರ ರೂಪಾಯಿ ಸಂಬಳ ತಗೊಂಡು ವಿದೇಶಕ್ಕೆ ಹೋಗೋದಿಕ್ಕೆ ಅಂತ ಭಾವಿಸಿಬಿಟ್ಟಿದ್ರು. ಅವರ ಅಪ್ಪ-ಅಮ್ಮ ಕೂಡ ಹಾಗೇ ಆಡ್ತಿದ್ರು ಅನ್ನಿ. ತಮ್ಮ ಮಕ್ಕಳು ಸಾಫ್ಟವೇರ್ ಇಂಜಿನಿಯರ್ಗಳಾಗದಿದ್ರೆ ಏನಪ್ಪಾ ಮಾಡೋದು? ಸರೀಕರ ಮುಂದೆ ತಲೆ… Continue reading

  • ಕಾದಿಹಳು ರಾಧೆ…

    ಕೃಷ್ಣ ಇವತ್ತೂ ಬರೋಲ್ಲ ಅಂತ ರಾಧೆಗೆ ಗೊತ್ತಿತ್ತು. ಆದ್ರೂ ಮರದಡಿಯಲ್ಲಿ ಕುಳಿತು ಇಡೀ ದಿನ ಕಾದಿದ್ದಾಳೆ. ಹಾಳು ಹೆಣ್ಣು ಜನ್ಮ…ಬಿಟ್ಟೆನೆಂದರೂ ಬಿಡದ ಮಾಯೆ. ಕಾಯುವುದೇ ಬದುಕಾಗಿಬಿಟ್ಟಿದೆ ತನಗೆ. ಒಮ್ಮೊಮ್ಮೆ ಹೀಗೆ ಅವನಿಗಾಗಿ ಕಾಯುತ್ತಿರುವಾಗ ಯೋಚಿಸ್ತಾಳೆ ರಾಧೆ…ತನ್ನ ಬದುಕು ಇಷ್ಟೇ ಆಯ್ತಲ್ಲಾ… ಬರದವರಿಗಾಗಿ ಕಾಯೋ ಕಾಯಕ. ಇನ್ಯಾವತ್ತೂ ಕಾಯೋಲ್ಲ ಅಂತ ನಿರ್ಧರಿಸಿಯೇ ಅಂದು ಮನೆಗೆ ಹೋಗಿರ್ತಾಳೆ. ಆದ್ರೂ… Continue reading

  • ಹೆಣ್ಮಕ್ಕಳು ಹೀಗೇನೇ…

    ತೋಟಕ್ಕೆ ಮತ್ತೆ ಹಸು ನುಗ್ಗಿದೆ…ದೇವ್ರೇ ಇವತ್ತು ಬೆಳಗ್ಗಿನಿಂದ ಈ ಹಸುಗಳನ್ನ ಬೆರ್ಸೋದು ಬಿಟ್ರೆ ಬೇರೆ ಇನ್ನೇನೂ ಕೆಲ್ಸನೇ ಆಗಿಲ್ಲ. ಯಾರ್ ಮನೆ ದನಗಳಿವು… ಕಟ್ಟಿ ಹಾಕಿಕೊಳ್ಳೋಕೆ ಅವ್ರಿಗೇನು ಧಾಡಿ…ಮೇಯಿಸೋಕೆ ಅಷ್ಟು ಇಷ್ಟ ಇದ್ರೆ ಬೇರೆ ಕಡೆ ಕರ್ಕೊಂಡು ಹೋಗ್ಲಿ…ನಮ್ ತೋಟನೇ ಆಗ್ಬೇಕಾ…ತೋಟಕ್ಕೆ ದುಡ್ಡು ಸುರಿಯೋದಲ್ಲದೆ ಈ ದನಗಳು ಹಾಳು ಮಾಡೋ ಬೇಲಿಗೂ ಮತ್ತಷ್ಟು ಖರ್ಚು. ಆಕೆ… Continue reading

  • ಹೀಗೊಂದು ತನಿಖೆ…

    ಕಳೆದೊಂದು ವಾರದಿಂದ ಯಾಕೋ ದೀಪಾ ಮೇಡಂಗೆ ಮನೆಕೆಲಸದ ಹುಡುಗಿ ಆಶಾ ಮೇಲೆ ಏನೋ ಡೌಟು. ಮಗು ನೋಡಿಕೊಳ್ಳೋಕೆ ಅಂತ ತವರು ಮನೆಯಿಂದ ಕರೆತಂದ ಹುಡುಗಿ ಮೊದಮೊದಲು ಚೆನ್ನಾಗೇ ಇತ್ತು. ಗಂಡ ಹೆಂಡತಿ ಇಬ್ಬರೂ ದುಡಿಯಲು ಹೊರಹೋಗೋ ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವವರು ಅನಿವಾರ್ಯ ಅನುವಂಥಾಗ್ಬಿಟ್ಟಿದೆ. ಹಾಗಾಗಿ ತನ್ನ ತವರು ಮನೆಯವ್ರಿಗೆ ಮೊದಲಿನಿಂದಲೇ ಪರಿಚರವಿದ್ದ ಒಕ್ಕಲು ಕುಟುಂಬದ ಹುಡುಗಿ… Continue reading