ಮಳೆಹನಿ

ಮಳೆಹನಿ

ಕೊನೆಗೆ ಉಳಿಯುವುದು ಇವೇ ಕತೆಗಳು

  • ಮಳೆ ಶುರುವಾಯ್ತಾ? ಈ ಸಲ ಯಾವ ಹೂವಿನ ಗಿಡ ನೆಟ್ರಿ?

    ಈ ಮಳೆಗಾಲ ಅಂದ್ರೆ ಮಲೆನಾಡಿನೋರಿಗೆಲ್ಲಾ ಹೂವಿನ ಗಿಡ ನೆಡೋ ಹುಚ್ಚಿನ ಕಾಲ. ಮಳೆಗಾಲ ಇಲ್ಲದಿದ್ರೂ ಇವ್ರಿಗೆ ಹೂವಿನ ಗಿಡ ಬೆಳ್ಸೋದು ಸದಾ ತಲೆಯಲ್ಲಿ ಗುಂಯ್ಗುಡ್ತಾ ಇರೋ ವಿಚಾರವೇ. ಅದಕ್ಕೇ ಯಾರ ಮನೆಯ ಪಾರಾಯಣ, ಚಂಡಿ ಹೋಮ, ವೈದಿಕೆ ಯಾವ್ದಕ್ಕೇ ಊಟಕ್ಕೆ ಹೋದ್ರೂ ಊಟವಾಗಿ ಕೈತೊಳೆದು ಒಂದು ಸುತ್ತು ಅವ್ರ ಮನೆಯ ಅಂಗಳಕ್ಕೆ ಹೋಗ್ದೇ ಬರೋದೇ ಇಲ್ಲ.… Continue reading

    ಮಳೆ ಶುರುವಾಯ್ತಾ? ಈ ಸಲ ಯಾವ ಹೂವಿನ ಗಿಡ ನೆಟ್ರಿ?
  • ಬದುಕು ಹೀಗೂ ಇರುತ್ತೆ

    ಮಧುಗೆ ನಿಜಕ್ಕೂ ಹಸಿವಾಗಿರ್ಲಿಲ್ಲ. ಮಧ್ಯಾಹ್ನ ತಿಂದ ಅನ್ನ ತಿಳಿಸಾರು ಈಗ ತೇಗಿದ್ರೂ ರುಚಿ ಸಿಕ್ಕುವಂತಿತ್ತು. ಆದ್ರೂ ಆಫೀಸ್ ಹತ್ರ ಪಿಕ್ ಮಾಡೋದಿಕ್ಕೆ ಗಿರಿ ಬರ್ತೀನಿ ಅಂದಾಗ ನಂಗೆ ಹಸಿವಾಗ್ತಿದೆ, ಹರಿ ಸ್ಯಾಂಡ್ ವಿಚ್ ಹತ್ರ ಹೋಗಿ ಒಂದು ಸ್ಯಾಂಡ್ ವಿಚ್ ತಿನ್ನೋಣ್ವಾ? ಅಂದ್ಲು. ಗಿರಿ ಹೂಂ ಅಂದ. ಇಬ್ರೂ ನೇರವಾಗಿ ಮನೆಗೆ ಹೋಗೋ ಬದ್ಲು ಮನೆಯಿಂದ… Continue reading

  • ಮಲೆನಾಡಿನ ಮಳೆಗಾಲ ಅಂದ್ರೆ ಹೀಗೂ ಇದೆ… ನಿಮಗೆ ಗೊತ್ತಿಲ್ಲ ಅಷ್ಟೇ !

    “ಮಳೆ ಇನ್ನೂ ಸರಿಯಾಗಿ ಬರ್ತಿಲ್ಲ !” ನಮ್ಮೂರಿನ ಯಾರನ್ನೇ, ‘ಮಳೆನಾ?’ ಅಂತ ಕೇಳಿದ್ರೆ ಹೀಗೇ ಅಂತಿದ್ದಾರೆ. ನಿಮ್ಮೂರಲ್ಲಿ ಮಳೆಗಾಲ ಸಖತ್ತಾಗಿರುತ್ತಲ್ವಾ? ಎಲ್ಲೆಲ್ಲೂ ಹಸಿರು, ಹೆಜ್ಜೆಗೊಂದು ವಾಟರ್ ಫಾಲ್ಸ್ ಅಂತೆಲ್ಲಾ ಬೆಂಗಳೂರು ಜನ ಕುರುಬುತ್ತಾರೆ. ನಿಜ, ಮಲೆನಾಡಿನಲ್ಲಿ ಮಳೆಗಾಲ ಚೆಂದವೇ. ಧೋ ಎಂದು ಸುರಿಯೋ ಮಳೆ ಬರೀ ನೀರಾಗಿ ಇಳಿಯೋದಿಲ್ಲ, ಅದೊಂದು ಬದುಕೇ ಆಗಿಬಿಡುತ್ತೆ. ಬೆಂಗಳೂರಿನಂತೆ ಸಂಜೆಯಿಂದ… Continue reading

    ಮಲೆನಾಡಿನ ಮಳೆಗಾಲ ಅಂದ್ರೆ ಹೀಗೂ ಇದೆ… ನಿಮಗೆ ಗೊತ್ತಿಲ್ಲ ಅಷ್ಟೇ !
  • ಇವಳು ಭದ್ರೆ…

    ಭದ್ರೆ ಎಂದರೆ ಬರೀ ನೀರಲ್ಲ, ನದಿಯಲ್ಲ ಅವಳೊಂದು ಭಾವ, ಭಾವಕ್ಕೆ ಭಕುತಿ ಹತ್ತು ಹೆಜ್ಜೆಯಾಚೆ ಏರಿ ಇಳಿದು ಹರಿಯುವ ಭದ್ರೆಯ ಆಳ ಅವಳಿಗೂ ಗೊತ್ತಿಲ್ಲ ಭೋರ್ಗರೆಯುವುದೊಂದೇ ಬದುಕಿನುದ್ದೇಶ ಹರಿಯುತ್ತಲೇ ಕಾಲ ದೇಶಗಳಿಂದಾಚೆ ಮುಕ್ತ ಮಳೆಯಲ್ಲಿ ಹೆದರಿಸುವ ಬಿಸಿಲಲ್ಲಿ ಬರಸೆಳೆಯುವ ಭದ್ರೆ ಕೇವಲ ನದಿಯಲ್ಲ, ಅವಳೇ ಬದುಕು, ಸೆಲೆ ಅಲ್ಲೆಲ್ಲೋ ಬೇಡವೆಂದರೂ ಕಟ್ಟಿದ ಸಂಕ, ಅಣೆಕಟ್ಟು ಮಗುವಿನ… Continue reading

    ಇವಳು ಭದ್ರೆ…
  • ಮಲೆನಾಡಿನಲ್ಲಿ ಮಳೆಗಾಲ ಬದಲಾಗಿದೆ !

    ಮಲೆನಾಡಿನಲ್ಲಿ ಸಾಮಾನ್ಯವಾಗಿ ಒಂದು ನಿರ್ದಿಷ್ಟವಾದ ದಿನಚರಿ ಇರುತ್ತೆ. ಮಳೆ ಬರುವ ಸೂಚನೆ ಸಿಕ್ಕ ಕೂಡಲೇ ಗದ್ದೆ ತೋಟಗಳಲ್ಲಿ ಕೆಲಸ ಚುರುಕಾಗುತ್ತೆ. ನಂತರ ದೀಪಾವಳಿ ಕಳೆದು ಸಂಕ್ರಾಂತಿ ಬರುವವರೆಗೂ ಜನರೆಲ್ಲಾ ಬಗೆಬಗೆಯ ಬೆಳೆಗಳನ್ನು ಬೆಳೆಯೋದ್ರಲ್ಲಿ ಬ್ಯುಸಿಯಾಗಿರ್ತಾರೆ. ನಡುನಡುವೆ ಬರೋ ರಾಶಿ ರಾಶಿ ಹಬ್ಬಗಳನ್ನೂ ಚಾಚೂ ತಪ್ಪದೇ ನೇಮ-ನಿಷ್ಟೆಯಿಂದ ಪಾಲಿಸ್ತಾರೆ. ಒಮ್ಮೆ ಬೆಳೆ ಕಟಾವು ಮುಗಿದ ಮೇಲೆ ಅವ್ರು… Continue reading

    ಮಲೆನಾಡಿನಲ್ಲಿ ಮಳೆಗಾಲ ಬದಲಾಗಿದೆ !
  • ಕಾಲಾಯ ತಸ್ಮೈ ನಮಃ

    ಅಪರ್ಣಾ ಅದ್ಯಾಕೆ ಹಾಗೆ ಮಾಡಿದಳು ಅಂತ ವೆಂಕಮ್ಮನಿಗೆ ಇಂದೂ ಗೊತ್ತಾಗಿಲ್ಲ. ಅಷ್ಟು ಮುದ್ದಾದ ತಮ್ಮ ಸೊಸೆ ಒಂದು ದಿನ ಎಲ್ಲರಿಗೂ ಹೇಳಿಯೇ ಮನೆಯಿಂದ ಶಾಶ್ವತ ಎನ್ನುವಂತೆ ಹೊರನಡೆದುಬಿಟ್ಟಿದ್ದಳು. ಅಪರ್ಣಾ ಮಲೆನಾಡಿನ ಹುಡುಗಿ. ವೆಂಕಮ್ಮ ತಮ್ಮ ಒಬ್ಬನೇ ಮಗ ವಿಶ್ವಾಸನಿಗೆ ಹೆಣ್ಣು ನೋಡಲು ಶುರು ಮಡಿದಾಗ ಬಂದ ಹೆಣ್ಣುಗಳನ್ನೆಲ್ಲಾ ವಿಶ್ವಾಸನಿಗಿಂತ ಹೆಚ್ಚಾಗಿ ಇವರೇ ಒಂದೊಂದು ಕಾರಣ ಹೇಳಿ… Continue reading

  • ಪರಿಷೆಯ ಧ್ಯಾನ

    ದಿನಾ ಸಿಟಿ ಬಸ್ಸುಗಳಲ್ಲಿ, ತರಕಾರಿ ಮಾರ್ಕೆಟ್ ಗಳಲ್ಲಿ ಜನಜಂಗುಳಿ ಇದ್ದೇ ಇರುತ್ತೆ. ಆದರೆ ಪರಿಷೆಯ ಘಮ ಬೇರೆಯದ್ದು. ಇಲ್ಲಿ ಬರೋರಲ್ಲಿ ಮುಕ್ಕಾಲು ಪಾಲು ಜನ ತಮ್ಮ ಊರುಗಳಿಂದ ಬೇರೆ ಬೇರೆ ಕಾರಣಗಳಿಗಾಗಿ ಕಾಂಕ್ರೀಟ್ ಕಾಡಿಗೆ ಬಂದು ತಮ್ಮನ್ನು ತಾವು ಮರೆತವರು. ಹಾಗಾಗಿ ಇವರಿಗೆ ತಮ್ಮೂರಿನ ಸಂತೆ, ಜಾತ್ರೆ…ಅಲ್ಲಿನ ಕ್ರೌಡು…ಗೆಳೆಯರೊಂದಿಗೆ ಖುಷಿ ಕೊಡುತ್ತಿದ್ದ ಬೆಂಡು ಬತ್ತಾಸು, ಮಂಡಕ್ಕಿ,… Continue reading

  • ರಿಟೈರ್ಡ್ ಹೋಟೆಲ್ !

    ಆ ಊರಿನಲ್ಲಿ ಒಂದು ರಿಟೈರ್ಡ್ ಹೋಟೆಲ್ ಇತ್ತು. ಅದು ಗುಂಡಣ್ಣನ ಫೇವರಿಟ್ ಸ್ಪಾಟ್. ಗುಂಡಣ್ಣ ಒಬ್ಬ ನಿವೃತ್ತ ಸರ್ಕಾರಿ ನೌಕರ. ಹುಟ್ಟಿದಾಗಿನಿಂದಲೂ ಅದೇ ಊರಿನಲ್ಲಿದ್ದು, ಅಲ್ಲೇ ಓದಿ, ಅಲ್ಲೇ ಕೆಲಸವನ್ನೂ… ಅದೂ ಸರ್ಕಾರಿ ಕೆಲಸವನ್ನು ಪಡೆದು ಅಲ್ಲೇ ನಿವೃತ್ತಿಯೂ ಆದವನು. ಅವನಿಗೆ ಆ ಊರನ್ನು ಬಿಟ್ಟು ಹೋಗೋಕೇ ಮನಸಿರ್ಲಿಲ್ಲ. ಹಾಗಾಗಿ ತನ್ನ ವೃತ್ತಿಜೀವನದಲ್ಲಿ ಬಂದ ಎಲ್ಲಾ… Continue reading

  • ಶಾಲ್ಮಲಿ ಉವಾಚ…

    ಯಾಕೋ ಈಗೀಗ ಶಾಲ್ಮಲಿ ತುಂಬಾ ಆರಾಮಾಗಿದ್ದಾಳೆ. ಹಾಗಂತ ಅದು ತಪ್ಪು ಅಂತಲ್ಲ. ಆದ್ರೆ ಮೊದಲೆಲ್ಲಾ ಯಾವಾಗ್ಲೂ ಡಿಸ್ಟರ್ಬ್ ಆಗಿರೋ ಥರಾ ಕಾಣ್ತಿದ್ಲು. ಈಗ ಹಾಗೇನಿಲ್ಲ, ನಿಜಕ್ಕೂ ಆರಾಮಾಗಿದ್ದಾಳೆ. ಮೊದಲಿಂದಲೂ ಶಾಲ್ಮಲಿ ಬಿಂದಾಸ್ ಹುಡುಗಿ. ಯಾರಿಗೂ, ಯಾವುದಕ್ಕೂ ಕೇರ್ ಮಾಡ್ತಲೇ ಇರ್ಲಿಲ್ಲ. ಬೇರೆಯವರ ತಂಟೆಗೂ ಹೋಗ್ತಿರ್ಲಿಲ್ಲ, ತನ್ನ ತಂಟೆಗೆ ಬೇರೆಯವ್ರು ಬರೋದಕ್ಕೂ ಬಿಡ್ತಿರ್ಲಿಲ್ಲ. ಮನೆಯಲ್ಲಿ ಅವಳನ್ನು ಬೆಳೆಸಿದ್ದೂ… Continue reading

    ಶಾಲ್ಮಲಿ ಉವಾಚ…
  • ಹೂ ಚಟ…

    ಶಾಲೆಗೆ ಹೋಗುವ ಹೆಣ್ಣುಮಕ್ಕಳು ನೀಟಾಗಿ ತಲೆಬಾಚಿ, ಜಡೆ ಹೆಣೆದು ಹೂಮುಡಿದುಕೊಂಡು ಹೋಗೋದನ್ನ ನೋಡಿ ಅದ್ಯಾವ ಕಾಲವಾಯಿತೋ ಅಂದುಕೊಳ್ಳುತ್ತಿದ್ದೆ. ಹಾಗಂತ ಇದೇನು ಯಾವುದೋ ಜಮಾನಾದ ಕಥೆಯಲ್ಲ. ಬಹುಶಃ ಬೆಂಗಳೂರಿನಂಥ ಮಹಾನಗರಗಳಲ್ಲಿ ‘ಯೂನಿಫಾರಂ’ ಅಂದ್ರೆ ಅದ್ರಲ್ಲಿ ತಲೆಗೆ ‘ಹೂ ಮುಡಿಯಬಾರದು’ ಅನ್ನೋ ಅಲಿಖಿತ ನಿಯಮ ಇರುತ್ತೇನೋ. ಆದ್ರೆ ಸರ್ಕಾರಿ ಶಾಲೆಯ ಮಕ್ಕಳಿಗೆ ಈ ನಿರ್ಬಂಧ ಇದ್ದಂತೆ ಕಾಣೋದಿಲ್ಲ. ಮಲೆನಾಡಿನಲ್ಲಿ… Continue reading