ಸಖೀಗೀತ

ಸಖಿ ಪಾಕ್ಷಿಕದ ‘ರೆಕ್ಕೆ-ಪುಕ್ಕ’ ಅಂಕಣದಲ್ಲಿ ಬೆಳಕು ಕಂಡ ಬರಹಗಳು

  • ಮಳೆ ಶುರುವಾಯ್ತಾ? ಈ ಸಲ ಯಾವ ಹೂವಿನ ಗಿಡ ನೆಟ್ರಿ?

    ಈ ಮಳೆಗಾಲ ಅಂದ್ರೆ ಮಲೆನಾಡಿನೋರಿಗೆಲ್ಲಾ ಹೂವಿನ ಗಿಡ ನೆಡೋ ಹುಚ್ಚಿನ ಕಾಲ. ಮಳೆಗಾಲ ಇಲ್ಲದಿದ್ರೂ ಇವ್ರಿಗೆ ಹೂವಿನ ಗಿಡ ಬೆಳ್ಸೋದು ಸದಾ ತಲೆಯಲ್ಲಿ ಗುಂಯ್ಗುಡ್ತಾ ಇರೋ ವಿಚಾರವೇ. ಅದಕ್ಕೇ ಯಾರ ಮನೆಯ ಪಾರಾಯಣ, ಚಂಡಿ ಹೋಮ, ವೈದಿಕೆ ಯಾವ್ದಕ್ಕೇ ಊಟಕ್ಕೆ ಹೋದ್ರೂ ಊಟವಾಗಿ ಕೈತೊಳೆದು ಒಂದು ಸುತ್ತು ಅವ್ರ ಮನೆಯ ಅಂಗಳಕ್ಕೆ ಹೋಗ್ದೇ ಬರೋದೇ ಇಲ್ಲ.… Continue reading

    ಮಳೆ ಶುರುವಾಯ್ತಾ? ಈ ಸಲ ಯಾವ ಹೂವಿನ ಗಿಡ ನೆಟ್ರಿ?
  • ಇವಳು ಭದ್ರೆ…

    ಭದ್ರೆ ಎಂದರೆ ಬರೀ ನೀರಲ್ಲ, ನದಿಯಲ್ಲ ಅವಳೊಂದು ಭಾವ, ಭಾವಕ್ಕೆ ಭಕುತಿ ಹತ್ತು ಹೆಜ್ಜೆಯಾಚೆ ಏರಿ ಇಳಿದು ಹರಿಯುವ ಭದ್ರೆಯ ಆಳ ಅವಳಿಗೂ ಗೊತ್ತಿಲ್ಲ ಭೋರ್ಗರೆಯುವುದೊಂದೇ ಬದುಕಿನುದ್ದೇಶ ಹರಿಯುತ್ತಲೇ ಕಾಲ ದೇಶಗಳಿಂದಾಚೆ ಮುಕ್ತ ಮಳೆಯಲ್ಲಿ ಹೆದರಿಸುವ ಬಿಸಿಲಲ್ಲಿ ಬರಸೆಳೆಯುವ ಭದ್ರೆ ಕೇವಲ ನದಿಯಲ್ಲ, ಅವಳೇ ಬದುಕು, ಸೆಲೆ ಅಲ್ಲೆಲ್ಲೋ ಬೇಡವೆಂದರೂ ಕಟ್ಟಿದ ಸಂಕ, ಅಣೆಕಟ್ಟು ಮಗುವಿನ… Continue reading

    ಇವಳು ಭದ್ರೆ…
  • ಮಲೆನಾಡಿನಲ್ಲಿ ಮಳೆಗಾಲ ಬದಲಾಗಿದೆ !

    ಮಲೆನಾಡಿನಲ್ಲಿ ಸಾಮಾನ್ಯವಾಗಿ ಒಂದು ನಿರ್ದಿಷ್ಟವಾದ ದಿನಚರಿ ಇರುತ್ತೆ. ಮಳೆ ಬರುವ ಸೂಚನೆ ಸಿಕ್ಕ ಕೂಡಲೇ ಗದ್ದೆ ತೋಟಗಳಲ್ಲಿ ಕೆಲಸ ಚುರುಕಾಗುತ್ತೆ. ನಂತರ ದೀಪಾವಳಿ ಕಳೆದು ಸಂಕ್ರಾಂತಿ ಬರುವವರೆಗೂ ಜನರೆಲ್ಲಾ ಬಗೆಬಗೆಯ ಬೆಳೆಗಳನ್ನು ಬೆಳೆಯೋದ್ರಲ್ಲಿ ಬ್ಯುಸಿಯಾಗಿರ್ತಾರೆ. ನಡುನಡುವೆ ಬರೋ ರಾಶಿ ರಾಶಿ ಹಬ್ಬಗಳನ್ನೂ ಚಾಚೂ ತಪ್ಪದೇ ನೇಮ-ನಿಷ್ಟೆಯಿಂದ ಪಾಲಿಸ್ತಾರೆ. ಒಮ್ಮೆ ಬೆಳೆ ಕಟಾವು ಮುಗಿದ ಮೇಲೆ ಅವ್ರು… Continue reading

    ಮಲೆನಾಡಿನಲ್ಲಿ ಮಳೆಗಾಲ ಬದಲಾಗಿದೆ !
  • ರಿಟೈರ್ಡ್ ಹೋಟೆಲ್ !

    ಆ ಊರಿನಲ್ಲಿ ಒಂದು ರಿಟೈರ್ಡ್ ಹೋಟೆಲ್ ಇತ್ತು. ಅದು ಗುಂಡಣ್ಣನ ಫೇವರಿಟ್ ಸ್ಪಾಟ್. ಗುಂಡಣ್ಣ ಒಬ್ಬ ನಿವೃತ್ತ ಸರ್ಕಾರಿ ನೌಕರ. ಹುಟ್ಟಿದಾಗಿನಿಂದಲೂ ಅದೇ ಊರಿನಲ್ಲಿದ್ದು, ಅಲ್ಲೇ ಓದಿ, ಅಲ್ಲೇ ಕೆಲಸವನ್ನೂ… ಅದೂ ಸರ್ಕಾರಿ ಕೆಲಸವನ್ನು ಪಡೆದು ಅಲ್ಲೇ ನಿವೃತ್ತಿಯೂ ಆದವನು. ಅವನಿಗೆ ಆ ಊರನ್ನು ಬಿಟ್ಟು ಹೋಗೋಕೇ ಮನಸಿರ್ಲಿಲ್ಲ. ಹಾಗಾಗಿ ತನ್ನ ವೃತ್ತಿಜೀವನದಲ್ಲಿ ಬಂದ ಎಲ್ಲಾ… Continue reading

  • ಶಾಲ್ಮಲಿ ಉವಾಚ…

    ಯಾಕೋ ಈಗೀಗ ಶಾಲ್ಮಲಿ ತುಂಬಾ ಆರಾಮಾಗಿದ್ದಾಳೆ. ಹಾಗಂತ ಅದು ತಪ್ಪು ಅಂತಲ್ಲ. ಆದ್ರೆ ಮೊದಲೆಲ್ಲಾ ಯಾವಾಗ್ಲೂ ಡಿಸ್ಟರ್ಬ್ ಆಗಿರೋ ಥರಾ ಕಾಣ್ತಿದ್ಲು. ಈಗ ಹಾಗೇನಿಲ್ಲ, ನಿಜಕ್ಕೂ ಆರಾಮಾಗಿದ್ದಾಳೆ. ಮೊದಲಿಂದಲೂ ಶಾಲ್ಮಲಿ ಬಿಂದಾಸ್ ಹುಡುಗಿ. ಯಾರಿಗೂ, ಯಾವುದಕ್ಕೂ ಕೇರ್ ಮಾಡ್ತಲೇ ಇರ್ಲಿಲ್ಲ. ಬೇರೆಯವರ ತಂಟೆಗೂ ಹೋಗ್ತಿರ್ಲಿಲ್ಲ, ತನ್ನ ತಂಟೆಗೆ ಬೇರೆಯವ್ರು ಬರೋದಕ್ಕೂ ಬಿಡ್ತಿರ್ಲಿಲ್ಲ. ಮನೆಯಲ್ಲಿ ಅವಳನ್ನು ಬೆಳೆಸಿದ್ದೂ… Continue reading

    ಶಾಲ್ಮಲಿ ಉವಾಚ…
  • ಚಕ್ರು

    ಚಕ್ರು ತುಂಬಾ ಪಾಪದ ಪ್ರಾಣಿ. ಅವನು ಯಾರೊಂದಿಗಾದ್ರೂ ಜಗಳ ಆಡೋದಿರಲಿ, ಮಾತಾಡೋದನ್ನೂ ಹೆಚ್ಚಿನವರು ನೋಡಿರಲಿಲ್ಲ. ತನ್ನದೇ ಲೋಕದಲ್ಲಿ ರಸ್ತೆಯ ಒಂದೇ ಬದಿಯಲ್ಲಿ ನಮ್ಮೂರ ಬೀದಿ ನ್ಯೂಯಾರ್ಕ್ ಸಿಟಿಯೇನೋ ಅನ್ನುವಷ್ಟು ಅಚ್ಚರಿಯಿಂದ ಅವನು ಪೇಟೆಗೆ ನಡೆದುಕೊಂಡು ಹೋಗ್ತಿದ್ದ. ನಮ್ಮೂರಿನ ಅತಿದೊಡ್ಡ ಪ್ರವಾಸಿ ಸ್ಥಳವಾದ ದೇವಸ್ಥಾನದಲ್ಲೇ ಅವನು ಹೆಚ್ಚು ಕಾಣಸಿಗುತ್ತಿದ್ದದ್ದು. Continue reading

    ಚಕ್ರು
  • ಬ್ಯುಸಿನಾ? ಒಂದ್ನಿಮಿಷ…

    ಈಗೆಲ್ಲಾ ಕೆಲಸಗಳು ಎಷ್ಟೊಂದು ಸುಲಭ ಆಗ್ಬಿಟ್ಟಿವೆ ಅಲ್ವಾ? ಅಡುಗೆ ಮಾಡೋಕೆ ತರಕಾರಿ ತಂದು ತೊಳೆದು ಕತ್ತರಿಸಬೇಕಾಗಿಲ್ಲ. ಅದೆಲ್ಲವನ್ನೂ ಮಾಡಿ ನೀಟಾಗಿ ಪ್ಯಾಕ್ ಮಾಡಿಟ್ಟಿರೋದನ್ನ ತಂದು ಬಳಸಿದ್ರೆ ಆಯ್ತು. ಮಸಾಲೆಗಳನ್ನ ಹುರಿದು ಯಾವ ಕಾಲವಾಯ್ತಪ್ಪಾ… ಎಂಟಿಆರ್ ರೆಡಿಮೇಡ್ ಮಿಕ್ಸ್ ಇದ್ಯಲಾ…ವೈ ಟೇಕ್ ಟೆನ್ಶನ್? ಅದೂ ಬೇಸರ ಅನ್ನೋರಿಗೆ ರೆಡಿ ಟು ಈಟ್‌ ಪ್ಯಾಕೆಟ್… ಕತ್ತರಿಸಿ, ಬಿಸಿ ಮಾಡಿ,… Continue reading